ಕಂಪ್ಯೂಟರ್ ಪರಿಚಯ ಮತ್ತು ಪರಿಕಲ್ಪನೆ

ಕಂಪ್ಯೂಟರ್ ಇಂದಿನ ದಿನಗಳಲ್ಲಿ ಕೇವಲ ಒಂದು ಪರಿಕಲ್ಪನೆಯಾಗಿ ಉಳಿದಿಲ್ಲ, ಅದು ನಮ್ಮ ಜನಜೀವನದ ಪರಿಕಲ್ಪನೆಯನ್ನೇ ಬದಲಿಸಿದೆ; ನಿತ್ಯ ಬದುಕಿನ ವಿಧಾನವೇ ಅದಾಗಿದೆ. ಒಂದು ಕಾಲಕ್ಕೆ ಉನ್ನತ ಶಿಕ್ಷಣ ಪಡೆದವರಿಗೆ ಹಾಗೂ ಅತ್ಯುನ್ನತ ವೈಜ್ಞಾನಿಕ ಕೇಂದ್ರ ಗಳಿಗೆ ಮಾತ್ರ ಮೀಸಲಾಗಿದ್ದ ಕಂಪ್ಯೂಟ ರ್, ಇದೀಗ ಪ್ರಾಥಮಿಕ ಶಾಲೆಗಳಿಗೆ ಕಾಲೇಜುವ ವಿದ್ಯಾರ್ಥಿಗಳಿಗೆ, ವ್ಯವಹಾರಸ್ಥರಿಗೆ, ಉದ್ಯೋಗಗಳಿಗೆ ಹಾಗೂ ಕಾರ್ಮಿಕ ವರ್ಗದವರಿಗೂ ಸಹ ಅತ್ಯಗತ್ಯವಾಗಿ ಬಳಸುವ ಸಾಧನವಾಗಿದೆ.ವೇಗವಾಗಿ ಮುಂದುವ ರೆದ ನಾಗರೀಕ ಸಮಾಜದ ಅವಿಭಾಜ್ಯ ಅಂಶವೇ ಅದಾಗಿದೆ.


ಇಂದಿನ ದೈನಂದಿನ ವಿದ್ಯಮಾನ-ವ್ಯವಹಾರ ಮತ್ತು ಔದ್ಯೋಗಿಕ ಕೆಲಸ ಕಾರ್ಯಗಳಲ್ಲಿ ದುಡಿಮೆಗೆ, ಕಂಪ್ಯೂಟರ್ ಕಲಿಕೆಯು ಪ್ರತಿಯೊಬ್ಬ ರಿಗೂ ಅನಿವಾರ್ಯವೆನಿಸಿದೆ.

1950ರ ನಂತರದ ದಶಕಗಳಲ್ಲಿ ಯಾರೂ ಊಹಿಸಲಾರದಷ್ಟು ತ್ವರಿತಗತಿಯಲ್ಲಿ ಬೆಳವಣಿಗೆ ಕಂಡ ಕಂಪ್ಯೂಟ ರ್, ಇಂದಿಗೆ ಎ.ಟಿ.ಎಮ್. ಮೂಲಕ ಹಣ ಕೊಡುವಂಥ ಹೆಮ್ಮ ರವಾಗಿ ನಿಂತಿದೆ. ನಮ್ಮಅಂಗೈಯಲ್ಲಿರುವಮೊಬೈಲ್-ಸೆಲ್ ಫೋನ್ ಸಹ ಪುಟ್ಟ ಕಂಪ್ಯೂಟರ್ ನಂತೇ ಬಳಕೆ ಬಂದಿದೆ. ನಾವು ವಿದ್ಯಾವಂತರಾಗಿಕಂಪ್ಯೂಟರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದೂ ಆದ್ಯ ಕರ್ತವ್ಯವೇ ಆಗಿರುತ್ತದೆ.

ಕಂಪ್ಯೂಟ ರ್ ಗೂ ಕೂಡ ಮನುಷ್ಯನಂತೆಯೇ ಎರಡು ಸ್ಮೃತಿಗಳಿವೆ-
1. ಶಾಶ್ವತ ಸ್ಮೃತಿ –(Read only Memory)
2. ತಾತ್ಕಾಲಿಕ ಸ್ಮೃತಿ –(Random Access Memory)