Wednesday, August 5, 2015

ಮೊದಲ ಕನ್ನಡ ತಂತ್ರಾಂಶದ ಬೋರ್ಡ್ ಜನಕ ಕೆ.ಪಿ.ರಾವ್

ನಮ್ಮ ಬಳಕೆಯಲ್ಲಿರುವ KGP ಕೀಬೋರ್ಡ್(ಕರ್ನಾಟಕ ಗಣಕಪರಿಷತ್ ಕೀಬೋರ್ಡ್)ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಶ್ರೀಯುತ ಕೆ.ಪಿ.ರಾವ್ ಅವರ ಮೂಲ ಕೀಬೋರ್ಡ್ ನ್ನೇ ಆಧರಿಸಿದೆ. ಮೊದಲು ಇದು ಶ್ರೀಲಿಪಿ ಕನ್ನಡ ಸಾಫ್ಟ್ ವೇರ್ ನಲ್ಲಿ ಬಳಸಲ್ಪಟ್ಟಿತು. ಶ್ರೀಲಿಪಿ ತಂತ್ರಾಂಶದಲ್ಲಿ ಯಥಾವತ್ ಕೆ.ಪಿ.ರಾವ್ ಅವರ ಕೀಬೋರ್ಡ್ ನ್ನೇ ಬಳಸಿಕೊಳ್ಳಲಾಗಿದೆ. ಇದು ಬಳಸಲು ಸುಲಭವೇ ಆಗಿದೆ. ಕನ್ನಡ ಉಚ್ಛಾರಣೆಗೆ ಮತ್ತು ನಾವು ಪ್ರಾಕ್ಟಿಕಲ್ ಆಗಿ ಬೆರಳುಗಳನ್ನು ಉಪಯೋಗಿಸುವ ವಿಧಾನಕ್ಕೆ ಇಲ್ಲಿ ಹೆಚ್ಚು ಆದ್ಯತೆ ಕೊಡಲಾಗಿದೆ. ಅಂದರೆ, ಇಲ್ಲಿ ಶಿಫ್ಟ್ ಕೀ ಬಳಕೆ ತೀರಾ ಕಡಿಮೆ. ಬೆರಳುಗಳಿಗೆ ಶ್ರಮವೆನಿಸುವುದಿಲ್ಲ. ಆದರೆ,KGP ಕೀಬೋರ್ಡ್ ಬಳಸುವಿಕೆ ಪ್ರಯಾಸವೆನಿಸಿದರೆ ಉತ್ಪ್ರೇಕ್ಷೆಯೇನಿಲ್ಲ.

Friday, June 12, 2015

ವಿನ್ ಕಂಪ್ಯೂಟರ‍್-ಕನ್ನಡ ಕಂಪ್ಯೂಟರ‍್ ಕಲಿಕೆ ಕೈಪಿಡಿ ಪುಸ್ತಕದ ಕನ್ನಡ ಸಾಫ್ಟ್ ವೇರ್‌ ಅಧ್ಯಾಯ

Tuesday, June 9, 2015

ಕನ್ನಡ ಕೀಬೋರ್ಡ್ -

ಕನ್ನಡ ನುಡಿ ಅಥವಾ ಬರಹ ತಂತ್ರಾಂಶ ನಿಮ್ಮ ಕಂಪ್ಯೂಟರ್‍ನಲ್ಲಿ ಇನ್ಸ್ ಟಾಲ್ ಮಾಡಿಕೊಂಡು ಬಳಸಿ, ಇಂಟರ್‍ನೆಟ್ ಕನ್ನಡ ಬೆರಳಚ್ಚಿಸುವಾಗ ಯೂನಿಕೋಡ್ ಕನ್ನಡ ತಂತ್ರಾಂಶ ಆಯ್ಕೆಯಲ್ಲಿ ಇದೇ ಕೀಬೋರ್ಡ್ ಬಳಸಬಹುದು.