Thursday, October 21, 2010

ಗಣಕವೆಂಬ ಕಂಪ್ಯೂಟರ‍್

ಕಂಪ್ಯೂಟರ‍್ ಮೊದಲು ಗಣಿತದ ಲೆಕ್ಕಾಚಾರ ಪ್ರಕ್ರಿಯೆಗಳನ್ನು ಮಾಡುವ ಯಂತ್ರವಷ್ಟೇ ಆಗಿತ್ತು. ಇಂದಿಗೂ ಕಂಪ್ಯೂಟರ‍್ ಗೆ ತಿಳಿಯುವುದು ಸಂಖ್ಯೆಗಳೇ. ಅಕ್ಷರಗಳು, ಅಂಕೆಗಳು, ಕೊಮಾ, ಫುಲ್ ಸ್ಟಾಪ್, ಪಂಕ್ಚುಯೇಷನ್, ಎಲ್ಲವೂ ಸಂಖ್ಯೆ ಸಂಕೇತಗಳೇ.. ಆದರೆ, "ಕಂಪ್ಯೂಟಿಂಗ್ ಎಂಬ ಪದದಿಂದ ಬಂದಿದೆ "ಕಂಪ್ಯೂಟರ‍್".

ಕಂಪ್ಯೂಟರ‍್ ಎಂದರೆ, ಕಂಪ್ಯೂಟರ‍್ ಉದ್ಯಮ ಕ್ಷೇತ್ರವು ಕ್ರಿಯಾಶೀಲವಾಗಿ ಕಂಪ್ಯೂಟರ‍್ ತಂತ್ರಜ್ಞಾನವನ್ನು ಹಾರ್ಡವೇರ‍್ ಮತ್ತು ಸಾಫ್ಟ್ ವೇರ‍್ ಬಳಸಿಕೊಂಡು ಅಭಿವೃದ್ಧಿಪಡಿಸುತ್ತಾ ಅದರ ಪೂರ್ಣ ಪ್ರಯೋಜನ ಪಡೆಯುವುದು. (Computing is usually defined as the activity of using and improving Computer Technology, Computer Hardware and Software). ಇಂದಿನ ಕಂಪ್ಯೂಟರ‍್ ಗಣಿತದ ಲೆಕ್ಕಾಚಾರಗಳಿಗಷ್ಟೇ ಸೀಮಿತವಾಗಿಲ್ಲ, ಅದರ ಸ್ವತಃ ಕಾರ್ಯನಿರ್ವಹಣೆಯಲ್ಲಿ ಸೂಚನಾ ವಿಧಿವಿಧಾನಗಳೇ ೦-೧ ಸಂಖ್ಯೆ-ಸಂಕೇತಗಳಿಂದ ಕೂಡಿದ್ದರೂ, ಅಕ್ಷರ ವಿನ್ಯಾಸ, ಚಿತ್ರಗಳು, ಧ್ವನಿಗ್ರಹಣ, ಏನಿಮೇಷನ್, ಮುಂತಾದ ತಂತ್ರಾಂಶಗಳೊಡನೆ ನಿಕಟ ಸಂಪರ್ಕ ಹೊಂದಿದ್ದು ವೈವಿಧ್ಯತೆಯಲ್ಲಿಇ ಬಹಳ ಮುಂದಿದೆ; ಕಂಪ್ಯೂಟರ‍್ ಅಧ್ಬುತವೆನಿಸಿದೆ.  ಆದ್ದರಿಂದ, "ಕಂಪ್ಯೂಟರ‍್ ” ಎಂದೇ ಕರೆಯೋಣ. -ವಿನ್ ಕಂಪ್ಯೂಟರ್‌  

Tuesday, October 19, 2010

ನನ್ನ ಕನ್ನಡ ಕಂಪ್ಯೂಟರ್ ಪುಸ್ತಕಗಳು (ಇ-ಬುಕ್ಸ್)

ನನ್ನ ಕಂಪ್ಯೂಟರ‍್ ಪುಸ್ತಕಗಳ ಪರಿಚಯ-

Study materials for Computer Basics 

೧. ವಿನ್ ಕಂಪ್ಯೂಟರ‍್ಸ್-  ಕಂಪ್ಯೂಟರ‍್ ಕಲಿಕೆ ಕೈಪಿಡಿಕಂಪ್ಯೂಟರ‍್ ಪ್ರಾಥಮಿಕ ಪರಿಕಲ್ಪನೆ-
ಅತಿ ಸರಳ ರೀತಿಯ ವಿವರಣೆಗಳೊಂದಿಗೆ ಕಂಪ್ಯೂಟರ‍್ ತಾಂತ್ರಿಕತೆ-ಸ್ಮೃತಿಕೋಶಗಳು, ಗಣಕವೆಂಬ ಕಂಪ್ಯೂಟರ‍್ !
ಅದರ ಭೌತಿಕ ಭಾಗಗಳು ಹಾಗೂ ತಂತ್ರಾಂಶಗಳ ಪರಿಚಯ ಮತ್ತು ಅದರ ಸಮಗ್ರ ಕಾರ್ಯಾಚರಣೆ,
ಕಂಪ್ಯೂಟರ‍್ ಇತಿಹಾಸ, ಮಾಹಿತಿ ತಂತ್ರಜ್ಞಾನ, ಆಪರೇಟಿಂಗ್  ಸಿಸ್ಟಂ ಹುಟ್ಟು ಬೆಳವಣಿಗೆ- ವಿಂಡೋಸ್,
ಅಪ್ಲಿಕೇಷನ್ಸ್-ಅನ್ವಯಿಕ ತಂತ್ರಾಂಶಗಳು-ಎಂ.ಎಸ್. ಆಫೀಸ್- ವರ್ಡ್, ಎಕ್ಸೆಲ್, ಪವರ‍್ ಪಾಯಿಂಟ್, ಏಕ್ಸೆಸ್.
ಕನ್ನಡ ಸಾಫ್ಟ್ ವೇರ‍್- ನುಡಿ ಮತ್ತು ಬರಹ, ಇಂಟರ‍್ ನೆಟ್ ತಾಂತ್ರಿಕತೆ, ಸರ್ವರ‍್ ಮತ್ತು ಕ್ಲೈಂಟ್ಸ್ ಕಂಪ್ಯೂಟರ‍್ ಗಳು,
ಇ-ಮೇಲ್, ಕನ್ನಡ ಇ-ಮೇಲ್, ಲಿನಕ್ಸ್ ಆಪರೇಟಿಂಗ್ ಸಿಸ್ಟಂ- ಉಬುಂಟು, ಓಪನ್ ಆಫೀಸ್ ಆರ್ಗ್-
ಪ್ರತಿಯೊಂದೂ ಅಧ್ಯಾಯಗಳ ಪ್ರಶ್ನೋತ್ತರಗಳು.
ಇಲ್ಲಿ ಇವೆಲ್ಲವೂ ಹಂತ ಹಂತಗಳಲ್ಲಿ, ಉದಾಹರಣೆಗಳ ಸಹಿತ...
ಈ ಪುಸ್ತಕವು ಖಂಡಿತ ಏನೂ ಗೊತ್ತಿಲ್ಲವರಿಗೂ ಸ್ವತಃ ಕಲಿಯಲು ಆಸಕ್ತಿ- ಆತ್ಮವಿಶ್ವಾಸ ಮೂಡಿಸುತ್ತದೆ.
ಕಲಿಕೆ ಎಲ್ಲ ಇತಿ ಮಿತಿಗಳನ್ನೂ ಮೀರಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತದೆ.
ಔದ್ಯೋಗಿಕ ಭರವಸೆಯನ್ನೂ ನೀಡುತ್ತದೆ.

 

೨. ವಿನ್ ಯುವರ‍್ PC  ಹಾರ್ಡ್‌ವೇರ‍್ ಕಲಿಕೆ ಕೈಪಿಡಿಕಂಪ್ಯೂಟರ‍್ ಪರಿಕಲ್ಪನೆ, ಕಂಪ್ಯೂಟರ‍್ ತಾಂತ್ರಿಕತೆ,  ಸ್ಮೃತಿಕೋಶಗಳು,ನಿತ್ಯ ನಿರ್ವಹಣೆ, ಹಾರ್ಡ್‌ವೇರ‍್, ಸಾಫ್ಟ್ ವೇರ‍್, ಅಸೆಂಬ್ಲಿಂಗ್,  ಕಂಪ್ಯೂಟರ‍್ ಭಾಷೆಗಳು, ಬೈನರಿ ಸಂಖ್ಯಾಪದ್ಧತಿಡಾಸ್ ಓ.ಎಸ್., ವಿಂಡೋಸ್ ಓ.ಎಸ್. ಮತ್ತು ಇತರೆ ಸಾಫ್ಟ್ ವೇರ‍್ ಇನ್ಸ್ ಟಲೇಷನ್, ನೆಟ್ ವರ್ಕಿಂಗ್,
ಇಂಟರ‍್ ನೆಟ್, ವೈಯರ‍್ ಲೆಸ್ ಏಕ್ಸೆಸ್, ಆಂಟಿ ವೈರಸ್, ಬಿಡಿಭಾಗಗಳ ವಿವರಣೆಗಳು,ಟ್ರಬಲ್ ಶೂಟಿಂಗ್- ಇಲ್ಲಿ ಎಲ್ಲವೂ ಉದಾಹರಣೆಗಳ ಸಹಿತ ಹಂತ ಹಂತಗಳಲ್ಲಿ...ಈ ಪುಸ್ತಕವು ಖಂಡಿತ ಏನೂ ಗೊತ್ತಿಲ್ಲವರಿಗೂ ಸ್ವತಃ ಹಾರ್ಡ್‌ವೇರ‍್ ಕಲಿಯಲು ಆಸಕ್ತಿ- ಆತ್ಮವಿಶ್ವಾಸ ಮೂಡಿಸುತ್ತದೆ.
ಪ್ರಾಥಮಿಕ  ಕಲಿಕೆಯ ಎಲ್ಲ ಇತಿ ಮಿತಿಗಳನ್ನೂ ಮೀರಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತದೆ. ಔದ್ಯೋಗಿಕ ಭರವಸೆಯನ್ನೂ ನೀಡುತ್ತದೆ. 


೩. ಮೇಜಿನ ಮೇಲಿನ ಪ್ರಕಾಶನ- ಡಿ.ಟಿ.ಪಿ. ಕಲಿಕೆ ಕೈಪಿಡಿಕಂಪ್ಯೂಟರ‍್ - ಡಿ.ಟಿ.ಪಿ. ಪರಿಚಯ, ಪ್ರಿ-ಪ್ರೆಸ್ ಪ್ರಾಸೆಸ್- ಪ್ರಕಟಣಾ ಪೂರ್ವಕ ಸಂಸ್ಕರಣೆ,
ವರ್ಡ್ ಪ್ರಾಸೆಸಿಂಗ್ ,ಆಫ್ ಸೆಟ್ ಪ್ರಿಂಟಿಂಗ್, ಪ್ಲೇಟ್ ಮೇಕಿಂಗ್- ಪೇಜ್ ಲೇಔಟ್ ಅಪ್ಲಿಕೇಷನ್ಸ್,ಡಿ.ಟಿ.ಪಿ.ತಂತ್ರಾಂಶಗಳು- ಪೇಜ್ ಮೇಕರ‍್, ಕೊರೆಲ್ ಡ್ರಾ, ಫೋಟೋಷಾಪ್ ಮತ್ತು ಪ್ರಿಂಟಿಂಗ್ ತಂತ್ರಜ್ಞಾನಕನ್ನಡ ಸಾಫ್ಟ್ ವೇರ‍್- ನುಡಿ, ಬರಹ, ಶ್ರೀಲಿಪಿ ಇಲ್ಲಿ ಎಲ್ಲವೂ ಸರಳ ಸುಲಭವಿಧಾನದಲ್ಲಿ ಸ್ವತಃ ಕಲಿಯಲು,ಪ್ರತಿಯೊಂದೂ ಅಧ್ಯಾಯವೂ ಉದಾಹರಣೆಗಳ ಸಹಿತ, ಹಂತ ಹಂತಗಳಲ್ಲಿ...ಈ ಪುಸ್ತಕವು ಖಂಡಿತ ಏನೂ ಗೊತ್ತಿಲ್ಲವರಿಗೂ ಸ್ವತಃ ಡಿ.ಟಿ.ಪಿ ಕಲಿಯಲು ಆಸಕ್ತಿ- ಆತ್ಮವಿಶ್ವಾಸ ಮೂಡಿಸುತ್ತದೆ.ಪ್ರಾಥಮಿಕ ಕಲಿಕೆಯ ಎಲ್ಲ ಇತಿ ಮಿತಿಗಳನ್ನೂ ಮೀರಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತದೆ. ಔದ್ಯೋಗಿಕ ಭರವಸೆಯನ್ನೂ ನೀಡುತ್ತದೆ  ನನ್ನ ಮೊದಲ ಪುಸ್ತಕ: ಕಂಪ್ಯೂಟರ‍್ ಕಲಿಕಗೊಂದು ಕೈಪಿಡಿ.

ಕಂಪ್ಯೂಟರ‍್ ಪ್ರಾಥಮಿಕ ಕಲಿಕೆಗೆ(ಬೇಸಿಕ್ಸ್) ಮಕ್ಕಳಿಗೆ ಉಪಯುಕ್ತವಾಗಿದೆ

ಕಂಪ್ಯೂಟರ‍್ ಪ್ರಾಥಮಿಕ ಕಲಿಕೆಗೆ(ಬೇಸಿಕ್ಸ್) ಮಕ್ಕಳಿಗೆ ಉಪಯುಕ್ತವಾಗಿದೆ

ಕಂಪ್ಯೂಟರ‍್ ಪ್ರಾಥಮಿಕ ಕಲಿಕೆಗೆ(ಬೇಸಿಕ್ಸ್) ಮಕ್ಕಳಿಗೆ ಉಪಯುಕ್ತವಾಗಿದೆ



Open publication - Free publishing - More kalike kaipidi

Wednesday, April 14, 2010

ಕಂಪ್ಯೂಟರ್ ಪರಿಕಲ್ಪನೆ (Computer Concepts)

ಕಂಪ್ಯೂಟರ‍್ ನ್ನು ಚಾಲನೆಗೊಳಿಸುವ ಮೊದಲು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು
I.ಮೊದಲನೆಯದಾಗಿ ಅದರ ಯಂತ್ರ ಭಾಷೆಯ ಸ್ಥೂಲ ಪರಿಚಯ ಮಾಡಿಕೊಳ್ಳುವುದು.
ಹಾಗೂ ಅದರ ಎರಡು ಸ್ಮೃತಿಕೋಶಗಳನ್ನು (memory chips) ಅರ್ಥಮಾಡಿಕೊಳ್ಳುವುದು.
ಅವು ಯಾವುವೆಂದರೆ-
೧.ರೀಡೋನ್ಲಿ ಮೆಮೊರಿ - ಇದು ಶಾಶ್ವತ ಮೆಮೊರಿ
೨. ರ‍್ಯಾಂಡಮ್  ಯಾಕ್ಸೆಸ್ ಮೆಮೊರಿ- ಇದು ತಾತ್ಕಾಲಿಕ ಮೆಮೊರಿ
ಮತ್ತು ಇವೆರಡೂ ಮೆಮೊರಿಗಳಿಗಿರುವ ವ್ಯತ್ಯಾಸ.


II. ಎರಡನೆಯದಾಗಿ ಹಾರ್ಡವೇರ‍್ ಮತ್ತು ಸಾಫ್ಟ್ ವೇರ‍್
ಮತ್ತು ಇವುಗಳಿಗಿರುವ ಸಂಬಂಧ.
೧. ಹಾರ್ಡ್‌ವೇರ‍್ ಅಂದರೆ ಬಿಡಿಭಾಗಗಳು
೨. ಸಾಫ್ಟ್ ವೇರ‍್ ಅಂದರೆ ತಂತ್ರಾಂಶಗಳು

ನಿಖರವಾಗಿ ಹಾಗೂ ನಿರ್ಧಿಷ್ಟವಾಗಿ ಹಾರ್ಡ್‌ವೇರ‍್ ಏನು ಕೆಲಸ ಮಾಡಬೇಕೆಂದು ಹೇಳುವುದೇ ಸಾಫ್ಟ್ ವೇರ‍್.

ಸಾಫ್ಟ್ ವೇರ‍್ ಗಳಲ್ಲಿ ಎರಡು ವಿಧಗಳು-
೧.ಸಿಸ್ಟಂ ಸಾಫ್ಟ್ ವೇರ‍್-ಅಂದರೆ ಯಂತ್ರ ನಿಯಂತ್ರಣ ತಂತ್ರಾಂಶ ಮತ್ತು
೨.ಅಪ್ಲಿಕೇಷನ್ ಸಾಫ್ಟ್ ವೇರ‍್- ಅಂದರೆ ಅಳವಡಿಕೆಯ ತಂತ್ರಾಂಶ.

-ಇವುಗಳ ಬಗ್ಗೆ ಸ್ವಷ್ಟವಾಗ ತಿಳುವಳಿಕೆಯನ್ನು ಹೊಂದುವುದು.

III. ಮೂರನೆಯದಾಗಿ ಆಪರೇಟಿಂಗ್ ಸಿಸ್ಟಮ್- ಇದು ಸಮಗ್ರ ಕಾರ್ಯಾಚರಣೆಯ ತಂತ್ರಾಂಶ.
ಅಂದರೆ, ಮಾಸ್ಟರ‍್ ಕಂಟ್ರೋಲ್ ಪ್ರೋಗ್ರಾಂ.
ಇದು ಕಂಪ್ಯೂಟರ‍್ ನ ಭೌತಿಕ ಭಾಗಗಳನ್ನು (ಬಿಡಿಭಾಗಗಳು (Hardware) ನಿಯಂತ್ರಿಸುವುದಲ್ಲದೇ ಬಳಕೆದಾರನೊಡನೆ
ಅಂದರೆ, ಕಂಪ್ಯೂಟರ‍್ ಯೂಸರ‍್ ಜೊತೆ ಸಂವಹನ ನಡೆಸುವುದು.

(It is the Master control program of the  Computer system and becomes an interpreter between the user and that machine).

IV. ನಾಲ್ಕನೆಯದಾಗಿ 
ದತ್ತಾಂಶ- ಡೇಟಾ
ಸಂಸ್ಕರಣೆ- ಪ್ರಾಸೆಸಿಂಗ್ ಮತ್ತು
ಮಾಹಿತಿ-ಇನ್ ಫರ್ಮೇ಼ಷನ್

-ಇವುಗಳನ್ನು ಅರ್ಥ ಮಾಡಿಕೊಳ್ಳುವುದಲ್ಲದೇ ಅವುಗಳಿಗಿರುವ ವ್ಯತ್ಯಾಸವನ್ನು ತಿಳಿಯುವುದು.

V. ದತ್ತಾಂಶ ತುಂಬುವ ಮತ್ತು ಫಲಿತಾಂಶ ನೀಡುವ ಸಾಧನಗಳು (Input and Output Devices)
1.ದತ್ತಾಂಶ ತುಂಬುವ ಸಾಧನಗಳೆಂದರೆ-
ಮುಖ್ಯವಾಗಿ ಕೀಬೋರ್ಡ್,  ಸ್ಕ್ಯಾನರ‍್(ಇದು ಔಟ್ ಪುಟ್ ಡಿವೈಸ್ ಕೂಡ ಹೌದು), ಮೌಸ್ ಇತ್ಯಾದಿ
2.ಫಲಿತಾಂಶ ನೀಡುವ ಸಾಧನಗಳೆಂದರೆ-
ಮಾನಿಟರ‍್ ಅಂದರೆ ದರ್ಶಕ, ಪ್ರಿಂಟರ‍್ಸ್ , ಸ್ಕ್ಯಾನರ‍್ಸ ಇತ್ಯಾದಿಗಳು.

VI.ಸಂಗ್ರಾಹ್ಯ ಸಾಧನಗಳು (Storage Devices)
ಹಾರ್ಡ ಡಿಸ್ಕ್, ಸಿಡಿ, ಡಿವಿಡಿ, ಪೆನ್  ಡ್ರೈವ್ ಇತ್ಯಾದಿ.

ವಿನ್ ಕಂಪ್ಯೂಟರ್ಸ- (ಎಲ್ಲರಿಗೂ ಸುಲಭವಿಧಾನ) -ಪುಸ್ತಕದಿಂದ
ಟೂಟರ್ಸ್ ಇವೆ ನೋಡಿ- ಡೌನ್ ಲೋಡ್ ಮಾಡಿಕೊಳ್ಳಿ

Monday, April 5, 2010

ಕಂಪ್ಯೂಟರ್ ಪರಿಕಲ್ಪನೆ ಮತ್ತು ಇತಿಹಾಸ ಇ-ಬುಕ್ (Computer Conecepts & History)


ಕಂಪ್ಯೂಟರ್  ಒಂದು ಬಹು ಉಪಯೋಗಿ ವಿದ್ಯುತ್ ಉಪಕರಣ. ಅದು ಮನುಷ್ಯನು ಕೊಟ್ಟ ದತ್ತಾಂಶವನ್ನು ಸ್ವೀಕರಿಸುತ್ತದೆ. ಈ  ಮೊದಲೇ ತನ್ನೊಳಗೆ ತಿಳಿಸಿಟ್ಟಿರುವ ಸೂಚನೆ ಆದೇಶಗಳ ಮೇರೆಗೆ ವಿದ್ಯುಕ್ತವಾಗಿ ದತ್ತಾಂಶವನ್ನು ಪರಾಂಬರಿಸಿ,ಪರಿಷ್ಕರಿಸಿ, ಸಂಸ್ಕರಿಸಿ ಪರಿಕಲನ ಮಾಡುವುದಲ್ಲದೇ, ನಮಗೆ ಬೇಕಾದ ರೀತಿಯಲ್ಲಿ ಫಲಿತಾಂಶವನ್ನು ಕರಾರುವಾಕ್ಕಾಗಿ ಹಾಗು ಖಚಿತವಾಗಿ ನೀಡುತ್ತದೆ. ಹಾಗೆ ಅದು ಚಾಚೂ ತಪ್ಪದೇ ಕಾರ್ಯ ನಿರ್ವಹಿಸುವ ಅದರ ಜ್ಞಾಪಕ ಶಕ್ತಿ ಅಗಾಧವೇ ಸರಿ. ವಿದ್ಯುತ್ ಕಡಿತ ಉಂಟಾಗದಿದ್ದರೆ, ನಿರಂತರ ನಿರಾಯಾಸವಾಗಿ ಕಾರ್ಯ ನಿರ್ವಹಿಸುತ್ತದೆ.

ಕಂಪ್ಯೂಟರ್ ಬೈನರಿ ಭಾಷೆಯನ್ನು  ಅಂದರೆ  ದ್ವಿಮಾನ ಪದ್ಧತಿಯ ಯಂತ್ರ ಭಾಷೆಯನ್ನು ಹೊಂದಿದೆ.
ಕ್ಯಾರೆಕ್ಟರ್ ಅಂದರೆ-ಅಕ್ಷರಗಳು,  ನಂಬರ್ಸ- ಅಂಕೆಗಳು.
ಇವುಗಳಲ್ಲದೇ ಚಿತ್ರಗಳು, ಕೊಮಾ, ಪುಲ್ ಸ್ಟಾಪ್- ಪೂರ್ಣ ವಿರಾಮ ಚುಕ್ಕಿ, ಸ್ಪೇಸ್-ಒಂದು ಖಾಲಿ ಸ್ಥಾನ ಎಲ್ಲವೂ ಮೂಲತಃ ಬೈನರಿ ಭಾಷೆಯನ್ನೇ ಅವಲಂಬಿಸಿರುತ್ತವೆ.
ಆನಂತರ ಹೈಲೆವೆಲ್ ಭಾಷೆಗಳು, ಇವುಗಳೊಂದಿಗೇ ನಮ್ಮ ಭಾಷೆಗೆ ತರ್ಜುಮೆಗೊಳಿಸುವ ಕಂಪೈಲರ್ ಗಳು ಇರುತ್ತವೆ.

ಅಂದಹಾಗೆ ಕಂಪ್ಯೂಟರ್ ಗೆ ತಿಳಿಯುವುದು ಬೈನರಿ ಕೋಡ್ಸ್ ಭಾಷೆ ಮತ್ತು ಬೈನರಿ ಅಂಕೆ ಸಂಖ್ಯಗಳೇ.
..
ಕನ್ನಡದ "ಗಣಕ" ವೆಂಬ ಪದ ಕೊಡುವ ಅರ್ಥಕ್ಕಿಂತ ಇಂದಿನ "ಕಂಪ್ಯೂಟರ್" ಎಂಬ ಪದದ ಅರ್ಥವ್ಯಾಪ್ತಿ ಬಹಳ ದೊಡ್ಡದು. ಆದ್ದರಿಂದ, ಕಂಪ್ಯೂಟರ್ ಮತ್ತು ಅದಕ್ಕೆ ಸಂಬಂಧಿಸಿದ ವಿಷಯ ಗಳನ್ನು ತಿಳಿಯುವಾಗ ಕಂಪ್ಯೂಟರ್ ನ ಪರಿಭಾಷೆಯ ಆಂಗ್ಲ ಪದಗಳನ್ನೇ ನಾವು ಕನ್ನಡ ಭಾಷೆಯೊಂದಿಗೆ ಈಗಾಗಲೇ ಅನಿವಾರ್ಯವಾಗಿ ಸೇರಿಸಿಕೊಂಡು ರೂಢಿಗತವಾಗಿ ಬಳಸುತ್ತಿರುವಂತೆಯೆ, 
ಮೊಟ್ಟ ಮೊದಲಿಗೆ "ಗಣಕ" ಎಂಬುದಕ್ಕೆ ಬದಲಾಗಿ "ಕಂಪ್ಯೂಟರ್" ಎಂಬ ಪದವನ್ನೇ ಬಳಸುವುದು ಹೆಚ್ಚು ಸೂಕ್ತವೆನಿಸುತ್ತದೆ.


ಕಂಪ್ಯೂಟರ‍್ ಪರಿಕಲ್ಪನೆ ಮತ್ತು ಇತಿಹಾಸ - ಇ ಬುಕ್ ಓದಿ...

ಪರ್ಸನಲ್ ಕಂಪ್ಯೂಟರ್

ಪರ್ಸನಲ್ ಕಂಪ್ಯೂರ‍್-
ಎಂದರೆ  ಒಂದು ಸಾಮಾನ್ಯಯಂತ್ರವಲ್ಲ. ಕಂಪ್ಯೂಟರ‍್ ನಲ್ಲಿ ಯಾವುದೇ ಕೋರ್ಸ್ ಕಲಿಯುವ ಮುನ್ನ ಅತ್ಯಗತ್ಯವಾದದ್ದು ಬೇಸಿಕ್ ನಾಲೆಡ್ಜ್, ಅಂದರೆ, ಪ್ರಾಥಮಿಕ ತಿಳುವಳಿಕೆ. ಅದು ದೊರಕುವುದು ಪರ್ಸನಲ್ ಕಂಪ್ಯೂಟರ‍್ ನಿಂದ. ಆನಂತರ, ನೀವು ಇಚ್ಛಿಸಿದರೆ ಅಸೆಂಬ್ಲಿಂಗ್, ಸಾರ್ಫ್ಟ ವೇರ‍್ ಇನ್ಸ್ ಟಲೇಷನ್ಸ್ , ನೆಟ್ ವರ್ಕ್ ಸಿಸ್ಟಂಸ್ , ಇಂಟರ್ ನೆಟ್ ಮತ್ತು ಪ್ರೋಗ್ರಾಮಿಂಗ್ ಭಾಷೆ ಇವುಗಳ ಕಲಿಕೆಯಲ್ಲಿ ಮುಂದುವರೆಯುವುದಿರುತ್ತದೆ.

ಹಾರ್ಡವೇರ‍್ ಅಂದರೆ- ಸಿಪಿಯು, ಕೀಬೋರ್ಡ್, ಮಾನಿಟರ‍್, ಮೌಸ್, ಡಿವಿಡಿ/ಸಿಡಿ ಡ್ರೈವ್, ಪ್ರಿಂಟರ‍್ ಇತ್ಯಾದಿಗಳೆಲ್ಲವೂ ಆಗಿರುತ್ತವೆ. ಒಂದು ಹಾರ್ಡ್‌ವೇರ‍್ ಅಥವಾ ಭೌತಿಕ ಬಿಡಿ ಭಾಗವು ಕೆಲಸ ಮಾಡಬೇಕೆಂದರೆ, ಅದು ಏನು ಕೆಲಸ ಮಾಬೇಕೆಂದು ಹೇಳುವಂತ ಸಾಫ್ಟ್ ವೇರ‍್ ಅಂದರೆ, ತಂತ್ರಾಂಶವು ಕಂಪ್ಯೂಟರ್ ನಲ್ಲಿ ಇನ್ಸ್ ಟಾಲ್ (ಅನುಸ್ಥಾಪನೆ) ಆಗಿರಬೇಕಾಗುತ್ತದೆ. (Software tells the  physical components of the computer what to do).

ಕಲಿಕೆ ಆರಂಭಿಸುವುದು ಹೇಗೆ..?
ಮೊದಲು ಪರ್ಸನಲ್ ಕಂಪ್ಯೂಟರ‍್ (PC) ನಲ್ಲಿ- ಹಾರ್ಡ್ ವೇರ‍್ ಗಳ ಪರಿಚಯ ಮಾಡಿಕೊಳ್ಳುವುದು.
ಕಂಪ್ಯೂಟರ‍್ ಸ್ಮೃತಿಕೋಶಗಳ ಬಗ್ಗೆ, ಅಂದರೆ, ಕಂಪ್ಯೂಟರ‍್ ಮೆಮೊರಿ ಚಿಪ್ಸ್ -
ಮೆಮೊರಿ ಚಿಪ್ಸ್ ಗಳಲ್ಲಿ-  ಮುಖ್ಯವಾಗಿ ೧) ರೀಡೋನ್ಲಿ ಮೆಮೊರಿ   ೨) ರ‍್ಯಾಂಡಮ್ ಏಕ್ಸೆಸ್ ಮೆಮೊರಿ ಗಳ ಬಗ್ಗೆ ಅರ್ಥಮಾಡಿಕೊಳ್ಳುವುದು.

ಸಾಫ್ಟ್‌ ವೇರ್ಸ  ಅಂದರೆ ತಂತ್ರಾಂಶಗಳು- 
ಇವುಗಳಲ್ಲಿ ಮುಖ್ಯವಾಗಿ ಸಿಸ್ಟಂ ಸಾಫ್ಟ್ ವೇರ‍್ ಮತ್ತು ಅಪ್ಲಿಕೇಷನ್ ಸಾಫ್ಟ್ ವೇರ‍್ ಎಂದರೇನು ?

ಸಿಸ್ಟಂ ಸಾಫ್ಟ್ ವೇರ‍್-ಯಂತ್ರ ನಿಯಂತ್ರಣ ತಂತ್ರಾಂಶ-. ಇದರಲ್ಲಿ ಪ್ರಧಾನವಾದುದೇ ಆಪರೇಟಿಂಗ್ ಸಿಸ್ಟಮ್- ಉದಾ: ವಿಂಡೋಸ್, ಲಿನಕ್ಸ್ , ಯೂನಿಕ್ಸ್.

ಆಪರೇಟಿಂಗ್ ಸಿಸ್ಟಮ್- ಅಂದಹಾಗೆ ಹೆಚ್ಚು ಬಳಕೆಯಲ್ಲಿರುವ  ವಿಂಡೋಸ್  ಹೇಗೆ ಸಿಸ್ಟಮ್ ಯೂನಿಟ್ ಮತ್ತು ಇತರೆ ಅದರ ಬಿಡಿಭಾಗಗಳನ್ನು ನಿಯಂತ್ರಣದಲ್ಲಿರಿಸುತ್ತದೆ. ಹಾಗೂ ಇತರೆ ಅಪ್ಲಿಕೇಷನ್ ಸಾಫ್ಟ್ ವೇರ್ ಗಳನ್ನು(ಉದಾ: ಎಂ.ಎಸ್.ಆಫೀಸ್, ಎಕ್ಸೆಲ್, ಪವರ್ ಪಾಯಿಂಟ್, ಕನ್ನಡ ನುಡಿ ಇತ್ಯಾದಿ..) ಅದರ ಅಧೀನದಲ್ಲಿರಿಸಿ ಕೊಂಡು ನಮಗೆ ಕೆಲಸ ಮಾಡಲು ಉಪಯುಕ್ತವಾಗುತ್ತದೆ? ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳವುದು.

Sunday, April 4, 2010

ಕಂಪ್ಯೂಟರ್ ಒಂದು ಇಣುಕು ನೋಟ (Computer At a Glance)

ಕಂಪ್ಯೂಟರ್ ಇಂದಿನ ದಿನಗಳಲ್ಲಿ ಕೇವಲ ಒಂದು ಪರಿಕಲ್ಪನೆಯಾಗಿ ಉಳಿದಿಲ್ಲ, ಅದು ನಮ್ಮ ಜನ ಜೀವನದ ಪರಿಕಲ್ಪನೆಯನ್ನೇ ಬದಲಿಸಿದೆ. ನಿತ್ಯ ಬದುಕಿನ ವಿಧಾನವೇ ಅದಾಗಿದೆ. 1950ರ ನಂತರದ ದಶಕಗಳಲ್ಲಿ ಯಾರೂ ಊಹಿಸಲಾರದಷ್ಟು ತ್ವರಿತಗತಿಯಲ್ಲಿ ಬೆಳವಣಿಗೆ ಕಂಡ ಕಂಪ್ಯೂಟರ್, ಇಂದಿಗೆ ಎ.ಟಿ.ಎಮ್.  ಮೂಲಕ ಹಣ ಕೊಡುವ ಹೆಮ್ಮರವಾಗಿ ಬೆಳೆದು ನಿಂತಿದೆ. ಇಂದಿನ ದಿನಗಳಲ್ಲಿ ವಿದ್ಯಾವಂತರಾಗಿ ಕಂಪ್ಯೂಟರ್ ಕಲಿಯುವುದೂ ಬದ್ದಿವಂತಿಕೆಯ ಲಕ್ಷಣವೆನಿಸಿದೆ.

ಕಂಪ್ಯೂಟರ್ ಗೂ ಮನುಷ್ಯನಂತೆಯೆ ಎರಡು ಸ್ಮೃತಿಗಳಿವೆ.  ಒಂದು ತಾತ್ಕಾಲಿಕ ಸ್ಮತಿ ಇನ್ನೊಂದು ಶಾಶ್ವತ ಸ್ಮೃತಿ


(Random Access Memory, and Read only Memory).

ಇವುಗಳ ಬಗ್ಗೆ ಮುಂದೆ ನೋಡೋಣ. ಕಂಪ್ಯೂಟರ್ ಸ್ವತಃ ಯಂತ್ರ ಭಾಷೆ ಹೊಂದಿದೆ.  ಅದು ತನ್ನ ಯಂತ್ರ ಭಾಷೆಯಿಂದಲೇ ಬಳಕೆ ದಾರರ ಸೂಚನೆ ಆದೇಶಗಳನ್ನು(Instructions and commands) ಪಾಲಿಸುತ್ತದೆ.  ತೆರೆಯಮೇಲೆ ಪ್ರತಿಕ್ರಿಯಿಸುತ್ತದೆ.  ನಮ್ಮೊಡನೆ ಸಂವಾದ  ನಡೆಸುತ್ತದೆ. ಅದೇ ಬೈನರಿ ಭಾಷೆಯಾಗಿದೆ.  ಪ್ರಧಾನ ಕಾರ್ಯಾಚರಣೆಯ ತಂತ್ರಾಂಶವೂ ಸೇರಿದಂತೆ ಅಂದರೆ ಆಪರೇಟಿಂಗ್ ಸಿಸ್ಟಂ ಸೇರಿದಂತೆ ಬರೆಯಲ್ಪಡುವ ಪ್ರೋಗ್ರಾಂಮಿಂಗ್ ಸೋರ್ಸ್ಕೊಡ್ಸ್ ( ಸಂಕೇತಿಕ ಕಾರ್ಯವಿಧಿಗಳೆಲ್ಲವೂ)  ಎಲ್ಲವೂ ತೆರೆಯ ಮರೆಯಲ್ಲೇ ಕಂಪೈಲರ್ ಗಳಿಂದ  ಬೈನರಿ ಭಾಷೆಗೆ ತರ್ಜುಮೆಗೊಳ್ಳುತ್ತವೆ.

ಕಂಪ್ಯೂಟರ್ ಮೊದಲು ಗಣಿತದ ಲೆಕ್ಕಾಚಾರ ಪ್ರಕ್ರಿಯೆಗಳನ್ನು ಮಾಡುಂತಹ ಯಂತ್ರವಷ್ಟೇ ಆಗಿತ್ತು.  ಅದರಾಚೆಗೂ ಬೆಳೆದು ಅಭಿವೃದ್ಧಿಪಥದಲ್ಲಿ ಸಾಗಿರುವ ಕಂಪ್ಯೂಟರ್ ಗೆ ತಿಳಿಯುವುದು ದ್ಚಿಮಾನ ಪದ್ಧತಿಯ ಸಂಖ್ಯೆಗಳೇ.  ಅಕ್ಷರಗಳು, ಅಂಕೆಗಳು, ಚಿತ್ರಗಳು,  ಶಬ್ಬಗಳು, ಕೋಮಾ, ಫುಲ್ ಸ್ಟಾಪ್, ಪಂಕ್ಷಯೇಷನ್ ,   ಇತರೆ  ಏನೆಲ್ಲವೂ ಸೇರಿದಂತೆ ಸ್ವತಃ ಅದರ ಕಾರ್ಯನಿರ್ವಹಣೆಯಲ್ಲಿನ ಸೂಚನಾ ವಿಧಿ ವಿಧಾನಗಳೇ ಸಂಖ್ಯೆಗಳಿಂದ ಕೂಡಿರುತ್ತವೆ. ಇದೆಲ್ಲವೂ ದ್ಚಿಮಾನ ಪದ್ಧತಿಯ ಬೈನರಿ ಕೋಡ್ಸ್ಗಳಿಂದಲೇ ಸಾಧ್ಯವಾಗಿದೆ. ಕಂಪ್ಯೂಟರ್ ಈ ಕೆಳಕಂಡ ಸ್ತರಗಳಲ್ಲಿ ಕೆಲಸ ಮಾಡುತ್ತದೆ-



1.ಹಾರ್ಡ್ ವೇರ್- ಬಿಡಿಭಾಗಗಳು,
2.ಸಾಫ್ಟ್ ವೇರ್ ಅಥವಾ ಪ್ರೋಗ್ರಾಂಸ್ – ತಂತ್ರಾಂಶಗಳು,
3.ಡೇಟಾ- ದತ್ತಾಂಶಗಳು,
4. ಪ್ರಾಸೆಸಿಂಗ್- ಸಂಸ್ಕರಣೆ ಮತ್ತು
5. ಔಟ್ ಪುಟ್ ರಿಸಲ್ಟ್- ಇನ್ ಫರ್ಮೇ ಷನ್- ಮಾಹಿತಿಯಾಗಿ ಫಲಿತಾಂಶಗಳು.
-ಇದನ್ನೆಲ್ಲ ಬಳಸಿಕೊಳ್ಳುವ ನಾವೇ ಯೂಸರ್ಸ್-ಬಳಕೆದಾರರು.

ಕಂಪ್ಯೂಟರ್ ಎಲ್ಲ ಯಂತ್ರಗಳಂತೆ ಸುಮ್ಮನೆ ಆಪರೇಟ್ ಮಾಡುವುದಲ್ಲ. ಅದರ ಮೂಲಭೂತ ಪರಿಕಲ್ಪನೆಯನ್ನು ಮೊದಲು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆಗ ಅದು ಹೇಗೆ ನಮ್ಮ ಆದೇಶಗಳನ್ನು ಸ್ವೀಕರಿಸುತ್ತದೆ ಮತ್ತು ಹೇಗೆ ನಮ್ಮೊಡನೆ ಪ್ರತಿಕ್ರಿಯಿಸುತ್ತದೆ ಎಂಬುದು ತಿಳಿಯುತ್ತದೆ.

ಯಾಕೆಂದರೆ,ಟಿ.ವಿ.ದೃಶ್ಯಗಳ ಮುಂದೆ ನಮ್ಮನ್ನು ನಾವು ಕಳೆದು ಕೊಳ್ಳುತ್ತೇವೆ. ಕಂಪ್ಯೂಟರ್ ದೃಶ್ಯಮಾಧ್ಯಮವೇ ಆದರೂ ಅದರ ಮುಂದೆ ನಮ್ಮನ್ನು ನಾವು ಆಲೋಚನೆಗೆ ಹಚ್ಚಿಕೊಂಡೇ ಸಾಗಬೇಕು. ಇದು ಹತ್ತು ವರ್ಷಗಳಿಂದ ಕಂಪ್ಯೂಟರ್ ಶಿಕ್ಷಕನಾಗಿ ಕನ್ನಡದಲ್ಲಿ ಕಂಪ್ಯೂಟರ್ ಪುಸ್ತಕಗಳನ್ನು ಬರೆದು ಪ್ರಕಟಿಸಿರವ ಈ ಲೇಖಕನ ಅನುಭವವೂ ಹೌದು.



ಕಂಪ್ಯೂಟರ್ ಬಿಡಿ ಭಾಗಗಳಾದ -ಹಾರ್ಡವೇರ್ ಏನು ಕೆಲಸ ಮಾಡಬೇಕೆಂಬುದನ್ನು ತಿಳಿಸುವುದೇ ಅದಕ್ಕೆ ಸಂಬಂಧಪಟ್ಟ “ಸಾಫ್ಟ್ ವೇರ್ ತಂತ್ರಾಂಶ.”
ಕಂಪ್ಯೂಟರ್ “ಆಪರೇಟಿಂಗ್ ಸಿಸ್ಟಂ” ಎಂದರೆ ಮಿಷಿನ್ ಖಂಡಿತ ಅಲ್ಲ! ಮಿಷಿನ್ ಗೇ ಜೀವ ತುಂಬುವ ಪ್ರಧಾನ ಕಾರ್ಯಾಚರಣೆಯ ತಂತ್ರಾಂಶ.



ಜನ ಸಾಮಾನ್ಯರು ಹೆಚ್ಚು ಬಳಸುವ ತಂತ್ರಾಂಶವೆಂದರೆ- ಮೈಕ್ರೋಸಾಫ್ಟ್ ವಿಂಡೋಸ್. ಈ ಪ್ರಧಾನ ಕಾರ್ಯಾಚರಣೆಯ ತಂತ್ರಾಂಶ ಅಂದರೆ, ಮಾಸ್ಟರ್ ಕಂಟ್ರೋಲ್ ಪ್ರೋಗ್ರಾಂನಲ್ಲಿ ಮೊದಲೇ ತಿಳಿಸಿಟ್ಟಿರುವ ಸೂಚನೆ ಆದೇಶಗಳ ಮೇರೆಗೆ ಇಡೀ ಕಂಪ್ಯೂಟರ್ ಯಂತ್ರವು ನಿಯಂತ್ರಣ ಹೊಂದಿರುತ್ತದೆ. ಮತ್ತು ಅದರ ಅಧೀನಕ್ಕೊಳಪಟ್ಟು ಕಂಪ್ಯೂಟರ್ ಕೆಲಸ ಮಾಡುತ್ತದೆ.

ಇತರೆ ಅಳವಡಿಕೆ ತಂತ್ರಾಂಶಗಳೂ ಆಪರೇಟಿಂಗ್ ಸಿಸ್ಟಂನ್ನೇ ಅವಲಂಬಿಸಿ ಕೆಲಸ ಮಾಡುವಂತೆ ತಯಾರಾಗಿರುತ್ತವೆ. ಬಳಕೆದಾರರ ಯಾವ ಕೆಲಸಕ್ಕೆ ಯಾವ ಸೂಚನೆ/ಆದೇಶಗಳೆಂಬುದೂ ಸಹ ಇಂತಹ ಅಳವಡಿಕೆಯ ತಂತ್ರಾಂಶಗಳಲ್ಲಿ (ಅಪ್ಲಿಕೇಷನ್ ಸಾಫ್ಟ್ ವೇರ್ಸನಲ್ಲಿ) ಮೊದಲೇ ತಿಳಿಸಲ್ಪಟ್ಟಿರುತ್ತವೆ.



ಮೊದಲು ಕಂಪ್ಯೂಟರ್  ಪರಿಕಲ್ಪನೆಯಲ್ಲಿ (Computer Concepts) -
ಅಂದರೆ, ಅದರ ಎರಡು ಪ್ರಧಾನ ಸ್ಮೃತಿಕೋಶಗಳಾದ(ಮೆಮೊರಿ ಚಿಪ್ಸ್)
1.ರೀಡೋನ್ಲಿ ಮೆಮೊರಿ ಮತ್ತು2. ರಾಂಡ್ಯ ಮ್ ಏಕ್ಸೇಸ್ ಮೆಮೊರಿ



- ಇವೆರಡು ಮೆಮೊರಿಗಳ ಬಗ್ಗೆ ಮೊದಲು ಸ್ಪಷ್ಟವಾದ ತಿಳುವಳಿಕೆಯನ್ನು ಪಡೆಯಬೇಕಾಗುತ್ತದೆ.

ಈ ಎರಡು ಸ್ಮತಿಕೋಶಗಳ ಬಗ್ಗೆ  ಅಂದರೆ, ಮೆಮರಿ ಚಿಪ್ಸ್ ಗೆ ಇರುವ ವ್ಯತ್ಯಾಸಗಳೇನು? ಅರ್ಥ್ಯೆ ಸಿಕೊಳ್ಳುವುದು  ಬಹಳ ಮುಖ್ಯವಾಗುತ್ತದೆ. ನಂತರ ಆಪರೇಟಿಂಗ್ ಸಿಸ್ಟಂ ಯಂತ್ರವನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡು ಹೇಗೆ ನಿಮ್ಮೊಡನೆ ಮಧ್ಯವರ್ತಿಯಾಗಿ ಸಂವಹನ ನಡೆಸುತ್ತದೆ ? ಎಂಬುದನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡೇ ಮುಂದುವರೆಯಬೇಕಾಗುತ್ತದೆ.  ಆಗ ಎಂ.ಎಸ್.ಆಫೀಸ್ ಹಾಗೂ ಇತರೆ ಅಪ್ಲಿಕೇಷನ್ ಸಾಫ್ಟ್ ವೇರ್ ಗಳೊಂದಿಗೆ ಕೆಲಸ ಮಾಡಲು ಸುಲಭವಾಗುತ್ತದೆ. ಮುಂದಿನ ಹಂತದಲ್ಲಿ ಇಂಟರ್ ನೆಟ್ ಬ್ರೌಸಿಂಗ್ ಮತ್ತು ಹಾರ್ಡವೇರ್ ಕಲಿಕೆ ಮತ್ತು ಪ್ರೋಗ್ರಾಮಿಂಗ್ ಗಳೂ ಕೂಡ ಅರ್ಥವಾಗುತ್ತವೆ.





ಕಂಪ್ಯೂಟರ್ ಶಿಕ್ಷಣದ ಬಗ್ಗೆ ಇಲ್ಲಿ ಧ್ವನಿವಾಹಿನಿಗಳಿವೆ-ಕೇಳಿ
ಹೆಚ್ಚಿನ ವಿವರಗಳಿಗೆ- "ವಿನ್ ಕಂಪ್ಯೂಟರ್- Software Made Simple"  ಪುಸ್ತಕ ಓದಿ.