ಗಣಕವೆಂಬ ಕಂಪ್ಯೂಟರ‍್
ಕಂಪ್ಯೂಟರ‍್ ಮೊದಲು ಗಣಿತದ ಲೆಕ್ಕಾಚಾರ ಪ್ರಕ್ರಿಯೆಗಳನ್ನು ಮಾಡುವ ಯಂತ್ರವಷ್ಟೇ ಆಗಿತ್ತು. ಇಂದಿಗೂ ಕಂಪ್ಯೂಟರ‍್ ಗೆ ತಿಳಿಯುವುದು ಸಂಖ್ಯೆಗಳೇ. ಅಕ್ಷರಗಳು, ಅಂಕೆಗಳು, ಕೊಮಾ, ಫುಲ್ ಸ್ಟಾಪ್, ಪಂಕ್ಚುಯೇಷನ್, ಎಲ್ಲವೂ ಸಂಖ್ಯೆ ಸಂಕೇತಗಳೇ.. ಆದರೆ, "ಕಂಪ್ಯೂಟಿಂಗ್ ಎಂಬ ಪದದಿಂದ ಬಂದಿದೆ "ಕಂಪ್ಯೂಟರ‍್".
ಕಂಪ್ಯೂಟರ‍್ ಎಂದರೆ, ಕಂಪ್ಯೂಟರ‍್ ಉದ್ಯಮ ಕ್ಷೇತ್ರವು ಕ್ರಿಯಾಶೀಲವಾಗಿ ಕಂಪ್ಯೂಟರ‍್ ತಂತ್ರಜ್ಞಾನವನ್ನು ಹಾರ್ಡವೇರ‍್ ಮತ್ತು ಸಾಫ್ಟ್ ವೇರ‍್ ಬಳಸಿಕೊಂಡು ಅಭಿವೃದ್ಧಿಪಡಿಸುತ್ತಾ ಅದರ ಪೂರ್ಣ ಪ್ರಯೋಜನ ಪಡೆಯುವುದು. (Computing is usually defined as the activity of using and improving Computer Technology, Computer Hardware and Software). ಇಂದಿನ ಕಂಪ್ಯೂಟರ‍್ ಗಣಿತದ ಲೆಕ್ಕಾಚಾರಗಳಿಗಷ್ಟೇ ಸೀಮಿತವಾಗಿಲ್ಲ, ಅದರ ಸ್ವತಃ ಕಾರ್ಯನಿರ್ವಹಣೆಯಲ್ಲಿ ಸೂಚನಾ ವಿಧಿವಿಧಾನಗಳೇ ೦-೧ ಸಂಖ್ಯೆ-ಸಂಕೇತಗಳಿಂದ ಕೂಡಿದ್ದರೂ, ಅಕ್ಷರ ವಿನ್ಯಾಸ, ಚಿತ್ರಗಳು, ಧ್ವನಿಗ್ರಹಣ, ಏನಿಮೇಷನ್, ಮುಂತಾದ ತಂತ್ರಾಂಶಗಳೊಡನೆ ನಿಕಟ ಸಂಪರ್ಕ ಹೊಂದಿದ್ದು ವೈವಿಧ್ಯತೆಯಲ್ಲಿಇ ಬಹಳ ಮುಂದಿದೆ; ಕಂಪ್ಯೂಟರ‍್ ಅಧ್ಬುತವೆನಿಸಿದೆ. ಆದ್ದರಿಂದ, "ಕಂಪ್ಯೂಟರ‍್ ” ಎಂದೇ ಕರೆಯೋಣ.
-ವಿನ್ ಕಂಪ್ಯೂಟರ್
No comments:
Post a Comment