ಕಂಪ್ಯೂಟರ್ ಇಂದಿನ ದಿನಗಳಲ್ಲಿ ಕೇವಲ ಒಂದು ಪರಿಕಲ್ಪನೆಯಾಗಿ ಉಳಿದಿಲ್ಲ, ಅದು ನಮ್ಮ ಜನ ಜೀವನದ ಪರಿಕಲ್ಪನೆಯನ್ನೇ ಬದಲಿಸಿದೆ. ನಿತ್ಯ ಬದುಕಿನ ವಿಧಾನವೇ ಅದಾಗಿದೆ. 1950ರ ನಂತರದ ದಶಕಗಳಲ್ಲಿ ಯಾರೂ ಊಹಿಸಲಾರದಷ್ಟು ತ್ವರಿತಗತಿಯಲ್ಲಿ ಬೆಳವಣಿಗೆ ಕಂಡ ಕಂಪ್ಯೂಟರ್, ಇಂದಿಗೆ ಎ.ಟಿ.ಎಮ್. ಮೂಲಕ ಹಣ ಕೊಡುವ ಹೆಮ್ಮರವಾಗಿ ಬೆಳೆದು ನಿಂತಿದೆ. ಇಂದಿನ ದಿನಗಳಲ್ಲಿ ವಿದ್ಯಾವಂತರಾಗಿ ಕಂಪ್ಯೂಟರ್ ಕಲಿಯುವುದೂ ಬದ್ದಿವಂತಿಕೆಯ ಲಕ್ಷಣವೆನಿಸಿದೆ.
ಕಂಪ್ಯೂಟರ್ ಗೂ ಮನುಷ್ಯನಂತೆಯೆ ಎರಡು ಸ್ಮೃತಿಗಳಿವೆ. ಒಂದು ತಾತ್ಕಾಲಿಕ ಸ್ಮತಿ ಇನ್ನೊಂದು ಶಾಶ್ವತ ಸ್ಮೃತಿ
(Random Access Memory, and Read only Memory).
ಇವುಗಳ ಬಗ್ಗೆ ಮುಂದೆ ನೋಡೋಣ. ಕಂಪ್ಯೂಟರ್ ಸ್ವತಃ ಯಂತ್ರ ಭಾಷೆ ಹೊಂದಿದೆ. ಅದು ತನ್ನ ಯಂತ್ರ ಭಾಷೆಯಿಂದಲೇ ಬಳಕೆ ದಾರರ ಸೂಚನೆ ಆದೇಶಗಳನ್ನು(Instructions and commands) ಪಾಲಿಸುತ್ತದೆ. ತೆರೆಯಮೇಲೆ ಪ್ರತಿಕ್ರಿಯಿಸುತ್ತದೆ. ನಮ್ಮೊಡನೆ ಸಂವಾದ ನಡೆಸುತ್ತದೆ. ಅದೇ ಬೈನರಿ ಭಾಷೆಯಾಗಿದೆ. ಪ್ರಧಾನ ಕಾರ್ಯಾಚರಣೆಯ ತಂತ್ರಾಂಶವೂ ಸೇರಿದಂತೆ ಅಂದರೆ ಆಪರೇಟಿಂಗ್ ಸಿಸ್ಟಂ ಸೇರಿದಂತೆ ಬರೆಯಲ್ಪಡುವ ಪ್ರೋಗ್ರಾಂಮಿಂಗ್ ಸೋರ್ಸ್ಕೊಡ್ಸ್ ( ಸಂಕೇತಿಕ ಕಾರ್ಯವಿಧಿಗಳೆಲ್ಲವೂ) ಎಲ್ಲವೂ ತೆರೆಯ ಮರೆಯಲ್ಲೇ ಕಂಪೈಲರ್ ಗಳಿಂದ ಬೈನರಿ ಭಾಷೆಗೆ ತರ್ಜುಮೆಗೊಳ್ಳುತ್ತವೆ.
ಕಂಪ್ಯೂಟರ್ ಮೊದಲು ಗಣಿತದ ಲೆಕ್ಕಾಚಾರ ಪ್ರಕ್ರಿಯೆಗಳನ್ನು ಮಾಡುಂತಹ ಯಂತ್ರವಷ್ಟೇ ಆಗಿತ್ತು. ಅದರಾಚೆಗೂ ಬೆಳೆದು ಅಭಿವೃದ್ಧಿಪಥದಲ್ಲಿ ಸಾಗಿರುವ ಕಂಪ್ಯೂಟರ್ ಗೆ ತಿಳಿಯುವುದು ದ್ಚಿಮಾನ ಪದ್ಧತಿಯ ಸಂಖ್ಯೆಗಳೇ. ಅಕ್ಷರಗಳು, ಅಂಕೆಗಳು, ಚಿತ್ರಗಳು, ಶಬ್ಬಗಳು, ಕೋಮಾ, ಫುಲ್ ಸ್ಟಾಪ್, ಪಂಕ್ಷಯೇಷನ್ , ಇತರೆ ಏನೆಲ್ಲವೂ ಸೇರಿದಂತೆ ಸ್ವತಃ ಅದರ ಕಾರ್ಯನಿರ್ವಹಣೆಯಲ್ಲಿನ ಸೂಚನಾ ವಿಧಿ ವಿಧಾನಗಳೇ ಸಂಖ್ಯೆಗಳಿಂದ ಕೂಡಿರುತ್ತವೆ. ಇದೆಲ್ಲವೂ ದ್ಚಿಮಾನ ಪದ್ಧತಿಯ ಬೈನರಿ ಕೋಡ್ಸ್ಗಳಿಂದಲೇ ಸಾಧ್ಯವಾಗಿದೆ. ಕಂಪ್ಯೂಟರ್ ಈ ಕೆಳಕಂಡ ಸ್ತರಗಳಲ್ಲಿ ಕೆಲಸ ಮಾಡುತ್ತದೆ-
1.ಹಾರ್ಡ್ ವೇರ್- ಬಿಡಿಭಾಗಗಳು,
2.ಸಾಫ್ಟ್ ವೇರ್ ಅಥವಾ ಪ್ರೋಗ್ರಾಂಸ್ – ತಂತ್ರಾಂಶಗಳು,
3.ಡೇಟಾ- ದತ್ತಾಂಶಗಳು,
4. ಪ್ರಾಸೆಸಿಂಗ್- ಸಂಸ್ಕರಣೆ ಮತ್ತು
5. ಔಟ್ ಪುಟ್ ರಿಸಲ್ಟ್- ಇನ್ ಫರ್ಮೇ ಷನ್- ಮಾಹಿತಿಯಾಗಿ ಫಲಿತಾಂಶಗಳು.
-ಇದನ್ನೆಲ್ಲ ಬಳಸಿಕೊಳ್ಳುವ ನಾವೇ ಯೂಸರ್ಸ್-ಬಳಕೆದಾರರು.
ಕಂಪ್ಯೂಟರ್ ಎಲ್ಲ ಯಂತ್ರಗಳಂತೆ ಸುಮ್ಮನೆ ಆಪರೇಟ್ ಮಾಡುವುದಲ್ಲ. ಅದರ ಮೂಲಭೂತ ಪರಿಕಲ್ಪನೆಯನ್ನು ಮೊದಲು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆಗ ಅದು ಹೇಗೆ ನಮ್ಮ ಆದೇಶಗಳನ್ನು ಸ್ವೀಕರಿಸುತ್ತದೆ ಮತ್ತು ಹೇಗೆ ನಮ್ಮೊಡನೆ ಪ್ರತಿಕ್ರಿಯಿಸುತ್ತದೆ ಎಂಬುದು ತಿಳಿಯುತ್ತದೆ.
ಯಾಕೆಂದರೆ,ಟಿ.ವಿ.ದೃಶ್ಯಗಳ ಮುಂದೆ ನಮ್ಮನ್ನು ನಾವು ಕಳೆದು ಕೊಳ್ಳುತ್ತೇವೆ. ಕಂಪ್ಯೂಟರ್ ದೃಶ್ಯಮಾಧ್ಯಮವೇ ಆದರೂ ಅದರ ಮುಂದೆ ನಮ್ಮನ್ನು ನಾವು ಆಲೋಚನೆಗೆ ಹಚ್ಚಿಕೊಂಡೇ ಸಾಗಬೇಕು. ಇದು ಹತ್ತು ವರ್ಷಗಳಿಂದ ಕಂಪ್ಯೂಟರ್ ಶಿಕ್ಷಕನಾಗಿ ಕನ್ನಡದಲ್ಲಿ ಕಂಪ್ಯೂಟರ್ ಪುಸ್ತಕಗಳನ್ನು ಬರೆದು ಪ್ರಕಟಿಸಿರವ ಈ ಲೇಖಕನ ಅನುಭವವೂ ಹೌದು.
ಕಂಪ್ಯೂಟರ್ ಬಿಡಿ ಭಾಗಗಳಾದ -ಹಾರ್ಡವೇರ್ ಏನು ಕೆಲಸ ಮಾಡಬೇಕೆಂಬುದನ್ನು ತಿಳಿಸುವುದೇ ಅದಕ್ಕೆ ಸಂಬಂಧಪಟ್ಟ “ಸಾಫ್ಟ್ ವೇರ್ ತಂತ್ರಾಂಶ.”
ಕಂಪ್ಯೂಟರ್ “ಆಪರೇಟಿಂಗ್ ಸಿಸ್ಟಂ” ಎಂದರೆ ಮಿಷಿನ್ ಖಂಡಿತ ಅಲ್ಲ! ಮಿಷಿನ್ ಗೇ ಜೀವ ತುಂಬುವ ಪ್ರಧಾನ ಕಾರ್ಯಾಚರಣೆಯ ತಂತ್ರಾಂಶ.
ಜನ ಸಾಮಾನ್ಯರು ಹೆಚ್ಚು ಬಳಸುವ ತಂತ್ರಾಂಶವೆಂದರೆ- ಮೈಕ್ರೋಸಾಫ್ಟ್ ವಿಂಡೋಸ್. ಈ ಪ್ರಧಾನ ಕಾರ್ಯಾಚರಣೆಯ ತಂತ್ರಾಂಶ ಅಂದರೆ, ಮಾಸ್ಟರ್ ಕಂಟ್ರೋಲ್ ಪ್ರೋಗ್ರಾಂನಲ್ಲಿ ಮೊದಲೇ ತಿಳಿಸಿಟ್ಟಿರುವ ಸೂಚನೆ ಆದೇಶಗಳ ಮೇರೆಗೆ ಇಡೀ ಕಂಪ್ಯೂಟರ್ ಯಂತ್ರವು ನಿಯಂತ್ರಣ ಹೊಂದಿರುತ್ತದೆ. ಮತ್ತು ಅದರ ಅಧೀನಕ್ಕೊಳಪಟ್ಟು ಕಂಪ್ಯೂಟರ್ ಕೆಲಸ ಮಾಡುತ್ತದೆ.
ಇತರೆ ಅಳವಡಿಕೆ ತಂತ್ರಾಂಶಗಳೂ ಆಪರೇಟಿಂಗ್ ಸಿಸ್ಟಂನ್ನೇ ಅವಲಂಬಿಸಿ ಕೆಲಸ ಮಾಡುವಂತೆ ತಯಾರಾಗಿರುತ್ತವೆ. ಬಳಕೆದಾರರ ಯಾವ ಕೆಲಸಕ್ಕೆ ಯಾವ ಸೂಚನೆ/ಆದೇಶಗಳೆಂಬುದೂ ಸಹ ಇಂತಹ ಅಳವಡಿಕೆಯ ತಂತ್ರಾಂಶಗಳಲ್ಲಿ (ಅಪ್ಲಿಕೇಷನ್ ಸಾಫ್ಟ್ ವೇರ್ಸನಲ್ಲಿ) ಮೊದಲೇ ತಿಳಿಸಲ್ಪಟ್ಟಿರುತ್ತವೆ.
ಮೊದಲು ಕಂಪ್ಯೂಟರ್ ಪರಿಕಲ್ಪನೆಯಲ್ಲಿ (Computer Concepts) -
ಅಂದರೆ, ಅದರ ಎರಡು ಪ್ರಧಾನ ಸ್ಮೃತಿಕೋಶಗಳಾದ(ಮೆಮೊರಿ ಚಿಪ್ಸ್)
1.ರೀಡೋನ್ಲಿ ಮೆಮೊರಿ ಮತ್ತು2. ರಾಂಡ್ಯ ಮ್ ಏಕ್ಸೇಸ್ ಮೆಮೊರಿ
- ಇವೆರಡು ಮೆಮೊರಿಗಳ ಬಗ್ಗೆ ಮೊದಲು ಸ್ಪಷ್ಟವಾದ ತಿಳುವಳಿಕೆಯನ್ನು ಪಡೆಯಬೇಕಾಗುತ್ತದೆ.
ಈ ಎರಡು ಸ್ಮತಿಕೋಶಗಳ ಬಗ್ಗೆ ಅಂದರೆ, ಮೆಮರಿ ಚಿಪ್ಸ್ ಗೆ ಇರುವ ವ್ಯತ್ಯಾಸಗಳೇನು? ಅರ್ಥ್ಯೆ ಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಂತರ ಆಪರೇಟಿಂಗ್ ಸಿಸ್ಟಂ ಯಂತ್ರವನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡು ಹೇಗೆ ನಿಮ್ಮೊಡನೆ ಮಧ್ಯವರ್ತಿಯಾಗಿ ಸಂವಹನ ನಡೆಸುತ್ತದೆ ? ಎಂಬುದನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡೇ ಮುಂದುವರೆಯಬೇಕಾಗುತ್ತದೆ. ಆಗ ಎಂ.ಎಸ್.ಆಫೀಸ್ ಹಾಗೂ ಇತರೆ ಅಪ್ಲಿಕೇಷನ್ ಸಾಫ್ಟ್ ವೇರ್ ಗಳೊಂದಿಗೆ ಕೆಲಸ ಮಾಡಲು ಸುಲಭವಾಗುತ್ತದೆ. ಮುಂದಿನ ಹಂತದಲ್ಲಿ ಇಂಟರ್ ನೆಟ್ ಬ್ರೌಸಿಂಗ್ ಮತ್ತು ಹಾರ್ಡವೇರ್ ಕಲಿಕೆ ಮತ್ತು ಪ್ರೋಗ್ರಾಮಿಂಗ್ ಗಳೂ ಕೂಡ ಅರ್ಥವಾಗುತ್ತವೆ.
ಕಂಪ್ಯೂಟರ್ ಶಿಕ್ಷಣದ ಬಗ್ಗೆ ಇಲ್ಲಿ ಧ್ವನಿವಾಹಿನಿಗಳಿವೆ-ಕೇಳಿ
ಹೆಚ್ಚಿನ ವಿವರಗಳಿಗೆ- "ವಿನ್ ಕಂಪ್ಯೂಟರ್- Software Made Simple" ಪುಸ್ತಕ ಓದಿ.

No comments:
Post a Comment